Category Archives: Kanaka Dasa

Works of Kanaka Dasaru

Hari bhakti Sara


Haribhakthisara of Sri Kanakadasa is published in kannada downloadable  PDF format

Master piece of Kanakadasa, bringing out the essence of Bhakthi and its significance in devotional advancement. This rendering  is in Bhamini Shatpadi.  It has 108 verses in total. In addition 3 Mangala Slokas are also there.

The Ultimate cream of devotion to Sri Hari, is expounded in lucid and no uncertain terms.

In first 17 verses, he praises Lord Sri Hari in unique ways [1-17].

Eg.

ಮಂಗಳಾತ್ಮಕ ದುರಿತತಿಮಿರ ಪ । ತಂಗ ಗರುಡತುರಂಗ ರಿಪುಮದ
ಭಂಗ ಕೀರ್ತಿತರಂಗ ಸುರಹರಸಂಗ ನೀಲಾಂಗ

ಅಂಗದಪ್ರಿಯನಂಗಪಿತ
। ಕಾಳಿಂಗಮರ್ದನ ಅಮಿತ ಕರುಣಾ
ಪಾಂಗ ಶ್ರೀನರಸಿಂಗ ರಕ್ಷಿಸು ನಮ್ಮನನವರತ
॥ 10

He states the purpose of this work  and pleads for his guidance from Verse 18 to 23.

Eg.

ಭಕ್ತಿಸಾರದ ಚರಿತೆಯನು ಹರಿ । ಭಕ್ತರಾಲಿಸುವಂತೆ ರಚಿಸುವೆ
ಯುಕ್ತಿಯಲಿ ಬರೆದೋದಿದವರಿಷ್ಟಾರ್ಥ ಸಿದ್ಧಿಪುದು

ಮುಕ್ತಿಗಿದು ನೆಲೆದೋರಿಪುದು ಹರಿ
। ಭಕ್ತರನು ಲಾಲಿಪುದು ನಿಜಮತಿ
ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ
॥ 18

ಗಿಳಿಯಮರಿಯನು ತಂದು ಪಂಜರ । ದೊಳಗೆ ಪೋಷಿಸಿ ಕಲಿಸಿ ಮೃದು
ನುಡಿಗಳನು ಲಾಲಿಸಿ ಕೇಳ್ವ ಪರಿಣತರಂತೆ ನೀನೆನಗೆ

ತಿಳುಹಿ ಮತಿಯನು ಎನ್ನ ಜಿಹ್ವೆಗೆ ಮೊಳಗುವಂದದಿ ನಿನ್ನ ನಾಮಾ

ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ
॥ 20

From 24th to 46th verse, he depicts the greatness of Sri Hari as founded in various Puranas.

ಪೊಗಲಳವೇ ನಿನ್ನ ನಾಮದ । ಸುಗುಣ ಸಚ್ಚಾರಿತ್ರ ಕಥನವ
ನಗಣಿತೋಪಮ ಅಮಿತ ವಿಕ್ರಮಗಮ್ಯ ನೀನೆಂದು

ನಿಗಮತತಿ ಕೈವಾರಿಸುತ ಪದ
। ಯುಗವ ಕಾಣದೆ ಬಳಲುತಿದೆ ವಾ
ಸುಕಿಶಯನ ಸರ್ವೇಶ ರಕ್ಷಿಸು ನಮ್ಮನನವರತ
॥ 21

ಹಸಿವರಿತು ತಾಯ್ತನ್ನ ಶಿಶುವಿಗೆ । ಒಸೆದು ಮೊಲೆ ಕೊಡುವಂತೆ ನೀ ಪೋ
ಷಿಸದೆ ಬೇರಿನ್ನಾರು ಪೋಷಕರಾಗಿ ಸಲಹುವರು

ಬಸಿರೊಳಗೆ ಬ್ರಹ್ಮಾಂಡಕೋಟಿಯ
। ಪಸರಿಸಿದ ಪರಮಾತ್ಮನೀನೆಂ |
ದುಸುರುತಿವೆ ವೇದಗಳು ರಕ್ಷಿಸು ನಮ್ಮನನವರತ
॥ 23

ಹಗೆಯರಿಗೆ ವರವೀವರಿಬ್ಬರು । ತೆಗೆಯಲರಿಯರು ಕೊಟ್ಟ ವರಗಳ
ತೆಗೆದು ಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ

ಸುಗುಣರಿನ್ನಾರುಂಟು ಕದನವ
। ಬಗೆದು ನಿನ್ನೊಳು ಜೈಸುವವರೀ
ಜಗದೊಳುಂಟೇ ದೇವ ರಕ್ಷಿಸು ನಮ್ಮನನವರತ
॥ 28

The essence of Man’s helplessness, birth, mortality, the Almighty’s magnanimity, command, power etc. are expounded from Verse 47 to 101.

ದೀನ ನಾನು ಸಮಸ್ತ ಲೋಕಕೆ । ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು

ಏನ ಬಲ್ಲೆನು ನಾನು ನೆರೆ ಸುಜ್ಞಾನಮೂರುತಿ ನೀನು ನಿನ್ನ ಸ

ಮಾನರುಂಟೇ ದೇವ ರಕ್ಷಿಸು ನಮ್ಮನನವರತ
॥ 49

ಮಾಂಸ ರಕ್ತದ ಮಡುವಿನಲಿ । ನವಮಾಸ ಜನನಿಯ ಜಠರದೊಳಗಿರು
ವಾ ಸಮಯದಲಿ ವೃತ್ತಿಯನು ಕಲ್ಪಿಸಿದ ಪ್ರಭುವಾರು

ನೀ ಸಲಹಿದವನಲ್ಲವೇ ಕರುಣಾ ಸಮುದ್ರನು ನೀನಿರಲು ಕಮ

ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ
॥ 56

ಎತ್ತಿದೆನು ನಾನಾ ಶರೀರವ । ಹೊತ್ತಲಿಸಿದೆನು ಸಲೆ  ಬೇ
ಸೆತ್ತು ನಿನ್ನಯ ಪದವ ಕಾಣದೆ ತೊಳಲಿ ಬಳಲಿದೆನು

ಸತ್ತು ಹುಟ್ಟುವ ಹುಟ್ಟಿ ಹಿಂಗುವ
। ಸುತ್ತ ತೊಡಕನು ಮಾಣಿಸದೆ ಪುರು
ಷೋತ್ತಮನೆ ಮನವೊಲಿದು ರಕ್ಷಿಸು ನಮ್ಮನನವರತ
॥ 60

ಗಣನೆಯಿಲ್ಲದ ಜನನಿಯರ ಮೊಲೆ । ಯುಣಿಸಲಾಪಯಬಿಂದುಗಳನದ
ನೆಣಿಸಲಳವೇ ಸಪ್ತಸಾಗರಕಧಿಕವೆನಿಸುವುದು

ಬಣಗು ಕಮಲಜನದಕೆ ತಾನೇ
। ಮಣೆಯಗಾರನು ಈತ ಮಾಡಿದ
ಕುಣಿಕೆಗಳ ನೀ ಬಿಡಿಸಿ ರಕ್ಷಿಸು ನಮ್ಮನನವರತ
॥ 62

ಎಂಟುಗೇಣಿನ ದೇಹ ರೋಮಗಳೆಂಟುಕೋಟಿಯು ಕೀಳ್ಗಳರವ
ತ್ತೆಂಟು ಮಾಂಸಗಳಿಂದ ಮಾಡಿದ ಮನೆಯ ಮನವೊಲಿದು

ನೆಂಟ ನೀನಿದ್ದಗಲಿದೊಡೆ ಒಣ ಹೆಂಟೆಯಲಿ ಮುಚ್ಚುವರು ದೇಹದ

ಲುಂಟೆ ಫಲ ಪೂರುಷಾರ್ಥ ರಕ್ಷಿಸು ನಮ್ಮನನವರತ
॥ 66

ಒಡೆಯ ನೀನೆಂದರಿತು ನಾ ನಿ । ಮ್ಮಡಿಯ ಭಜಿಸದೆ ದುರುಳನಾದೆನು
ಮಡದಿ ಮಕ್ಕಳ ಮೋಹದಲಿ ಮನ ಸಿಲುಕಿತಡಿಗಡಿಗೆ

ಮಡದಿಯಾರೀ ಮಕ್ಕಳಾರೀ
। ಒಡಲಿಗೊಡೆಯನು ನೀನು ನೀ ಕೈ
ಪಿಡಿದು ಮುದದಲಿ ಬಿಡದೆ ರಕ್ಷಿಸು ನಮ್ಮನನವರತ
॥ 70

ವರುಷ ನೂರಾಯುಷ್ಯವದರೊಳ । ಗಿರುಳು ಕಳೆದೈವತ್ತು ಐವ
ತ್ತರಲಿ ವಾರ್ಧಿಕ ಬಾಲ್ಯ ಕೌಮಾರದಲಿ ಮುವತ್ತು

ಇರದೆ ಸಂದದು ಬಳಿಕ ಇಪ್ಪ
। ತ್ವರುಷವದರೊಳಗಾದುದಂತಃ
ಕರಣ ನಿನ್ನಳಗಿತ್ತು ರಕ್ಷಿಸು ನಮ್ಮನನವರತ
॥ 80

ಸತ್ತವರಿಗಳಲೇಕೆ ತನ್ನನು ಹೊತ್ತವರು ಹೆತ್ತವರು  ತಾವ್
ಸತ್ತುಹೋಗುವರಲ್ಲದುಳಿವರೆ  ಮರುಗಲೇಕಿನ್ನು

ಮೃತ್ಯು ಬೆನ್ನಿನೊಳಿಹುದ ತಾವಿ
। ನ್ನತ್ತು ಮಾಡುವೇದನು ಪೂರ್ವದ
ತೆತ್ತಿಗನು ನೀನೀಗ ರಕ್ಷಿಸು ನಮ್ಮನನವರತ
॥ 92

ತೊಲಗುವರು ಕಡೆಕಡೆಗೆ ತಾ ಹೊಲೆ । ಹೊಲೆಯೆನುತ ಕಳವಳಿಸಿ ಮೂತ್ರದ
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು

ಜಲದೊಳಗೆ ಮುಳುಗಿದರೆ ತೊಲಗದು
। ಹೊಲಗೆಲಸವೀದೇಹದೊಳು ನೀ
ನೆಲೆಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ
॥ 99

ಎಂಜಲೆಂಜಲು ಎಂಬರಾನುಡಿ । ಎಂಜಲಲ್ಲವೇ ವಾರಿ ಜಲಚರ
ದೆಂಜಲಲ್ಲವೇ ಹಾಲು ಕರುವಿನ ಎಂಜಲೆನ್ನಿಸದೇ

ಎಂಜಲಿಲ್ಲದೆಯುಂ ಪರ
। ರೆಂಜಲಲ್ಲದೆ ಬೇರೆ ಭಾವಿಸ
ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ
॥ 101

From Verse 102 to 108 he brings out the resultant benefits of imbibing the values advocated:

eg.

ನೂರುಕನ್ಯಾದಾನವನು ಭಾ । ಗೀರಥಿಸ್ನಾನವನು ಮಿಗೆ ಕೈ
ಯಾರ ಗೋವ್ಗಳ ಪ್ರೇಮದಿಂದಲಿ ಭೂಸುರರಿಗೊಲಿದು

ಊರುಗಳನೂರಗ್ರಹಾರವ
। ದಾರೆಯೆರದಿತ್ತಂತೆ ಫಲ ಕೈ
ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ವರಿಗೆ
॥ 106

ಮೇರು ಮಂದರನಿಭಸುವರ್ಣವ ವಾರಿ । ಮಧ್ಯದೊಳಿರುವ ಅವನಿಯ
ನಾರಿಯರ  ಗಾಯತ್ರಿ ಪಶುಗಳನಿತ್ತ ಫಲವಹುದು

ಧಾರುಣಿಯಳೀ ಭಕ್ತಿಸಾರವ
। ನಾರು ಓದುವವರಿಗನುದಿನ
ಚಾರುವರಗಳನಿತ್ತು ರಕ್ಷಿಪನಾದಿಕೇಶವನು
॥ 107

Let us be our fortunate  to have a glimpse of this noble work ! Click the below link and enjoy !
Haribhaktisara-23022014