All posts by srimadhvyasa

Proud to be Acharya Madhwa's follower.

Harikathamruthasara


Harikathamruthasara of Sri Jagannatha dasaru is published in Kannada and sanskrit PDF downloadable format

Called with reverence as Anu Sudha, Harikathamruthasara lushes out most important elements of dwaita philosophy in most lucid style, unambiguously.

Like a Busy Bee collecting nector, from the loveliest of flowers, Sri Jagannatha Dasaru, has collected the essence of tatwawada from myriad of sources like Veda, Purana, Itihasa, sarvamoola and what not. There is a saying “ಆಡು ಮುಟ್ಟದ ಸಪ್ಪಿಲ್ಲ”. This aptly applies to our humble and learned scholar Sri Jagannatha Dasaru. He has garnered all the relevant axioms from apt sources, with utmost elegance and clarity. Presentation comes with glaring unambiguity in no uncertain terms. Goddess Saraswathi and Bharathi has literally danced on his holy tongue, setting forth all the premayas in exquisite manner. Acharya Madhwa’s heart is distilled with supreme ability, in this noble work. Particularly for a common man it is an ambrosia, stuffed with all the tenets, in his noble journey of seeking Lord. Art of reconciliation and aptly intertwining the most intricate aspects of philosophy is breathtaking. Even learned scholars are dumbstruck at its lucid precision.

One should be really fortunate, even to have a glimpse of it. Those you can bring out the stanzas by heart, really reaps the beneficial harvest.

To summarise, its utility, see the Phalashruthi:

ಹರಿಕಥಾಮೃತ ಸಾರ ಶ್ರೀಮ-ದ್ಗುರುವರ ಜಗನ್ನಾಥ ದಾಸರು
ಕರ ತಲಾಮಲ-ಕವೆನೆ ಪೇಳಿದ ಸಕಲ ಸಂಧಿಗಳ।
ಪರಮ ಪಂಡಿತ-ಮಾನಿಗಳು ಮತ್ಸರಿಸ-ಲೆದೆಕಿಚ್ಚಾಗಿ ತೋರುವ
ದರಸಿ-ಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ॥33-1-989॥

ಭಾಮಿನೀ ಷಟ್ಪದಿಯ ರೂಪದ-ಲೀ ಮಹಾದ್ಭುತ ಕಾವ್ಯದಾದಿಯೊ
ಳಾ ಮನೋಹರ ತರತ-ಮಾತ್ಮಕ ನಾಂದಿ ಪದ್ಯಗಳ।
ಯಾಮ ಯಾಮಕೆ ಪಠಿಸುವವರ ಸುಧಾಮ ಸಖ ಕೈಪಿಡಿಯ-ಲೋಸುಗ
ಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯ-ಕೇನೆಂಬೆ॥33-2-990॥

ಸಾರವೆಂದರೆ ಹರಿಕಥಾಮೃತ ಸಾರವೆಂ-ಬುವುದೆಮ್ಮ ಗುರುವರ
ಸಾರಿದಲ್ಲದೆ ತಿಳಿಯ-ದೆನುತ ಮಹೇಂದ್ರ ನಂದನನ
ಸಾರಥಿಯ ಬಲಗೊಂಡು ಸಾರಾಸಾರಗಳ ನಿರ್ಣಯಿಸಿ ಪೇಳ್ದನು
ಸಾರ ನಡೆವ ಮಹಾತ್ಮರಿಗೆ ಸಂಸಾರ-ವೆಲ್ಲಿಹುದೊ॥33-3-991॥

ದಾಸವರ್ಯರ ಮುಖದಿ ನಿಂದು ರಮೇಶನನು ಕೀರ್ತಿಸುವ ಮನದಭಿ
ಲಾಷೆಯಲಿ ವರ್ಣಾಭಿಮಾನಿ-ಗಳೊಲಿದು ಪೇಳಿಸಿದ।
ಈ ಸುಲಕ್ಷಣ ಕಾವ್ಯದೊಳು ಯತಿ ಪ್ರಾಸಗಳಿಗೆ ಪ್ರಯತ್ನವಿಲ್ಲದೆ
ಲೇಸು ಲೇಸೆನೆ ಶ್ರಾವ್ಯ-ಮಾದುದೆ ಕುರುಹು ಕವಿಗಳಿಗೆ॥33-4-992॥

ಪ್ರಾಕೃತೋ-ಕ್ತಿಗಳೆಂದು ಬರಿದೆ ಮಹಾ ಕೃತಘ್ನರು ಜರಿವರಲ್ಲದೆ
ಸ್ವೀಕೃತವ ಮಾಡದಲೆ ಬಿಡುವರೆ ಸುಜನ-ರಾದವರು।
ಶ್ರೀಕೃತೀ ಪತಿಯ-ಮಲ ಗುಣಗಳು ಈ ಕೃತಿಯೊ-ಳುಂಟಾದ ಬಳಿಕಿದು
ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಗುಣರಿಗೆ॥33-5-993॥

ಶ್ರುತಿಗೆ ಶೋಭನ-ವಾಗದೊಡೆ ಜಡಮತಿಗೆ ಮಂಗಳ-ವೀಯದೊಡೆ ಶ್ರುತಿ
ಸ್ಮೃತಿಗೆ ಸಮ್ಮತ-ವಲ್ಲದಿದ್ದೊಡೆ ನಮ್ಮ ಗುರುರಾಯ |
ಮಥಿಸಿ ಮಧ್ವಾಗಮ ಪಯೋಬ್ಧಿಯ ಕ್ಷಿತಿಗೆ ತೋರಿದ ಬ್ರಹ್ಮ ವಿದ್ಯಾ
ರತರಿ-ಗೀಪ್ಸಿತ ಹರಿಕಥಾಮೃತ ಸಾರ ಸೊಗಯಿಸದೆ॥33-6-994॥

ಭಕ್ತಿವಾದದಿಪೇಳ್ದರೆಂಬಪ್ರಸಕ್ತಿಸಲ್ಲದುಕಾವ್ಯದೊಳುಪುನ
ರುಕ್ತಿಶುಷ್ಕಸಮಾಸಪದವ್ಯತ್ಯಾಸಮೊದಲಾದ
ಯುಕ್ತಿಶಾಸ್ತ್ರವಿರುದ್ಧಶಬ್ದವಿಭಕ್ತಿವಿಷಮಗಳಿರಲುಜೀವ
ನ್ಮುಕ್ತಯೋಗ್ಯವಿದೆಂದುಸಿರಿಮದನಂತಮೆಚ್ಚುವನೆ॥33-7-995॥

ಆಶುಕವಿ ಕುಲ ಕಲ್ಪತರು ದಿಗ್ದೇಶ ವರಿಯಲು ರಂಗನೊ-ಲುಮೆಯ
ದಾಸ ಕೂಟಸ್ಥರಿ-ಗೆರಗಿ ನಾ ಬೇಡಿ ಕೊಂಬುವೆನು।
ಈ ಸುಲಕ್ಷಣ ಹರಿಕಥಾಮೃತ ಮೀಸಲ-ಳಿಯದೆ ಸಾರ ದೀರ್ಘ
ದ್ವೇಷಿಗಳಿ-ಗೆರೆಯದಲೆ ಸಲಿಸುವು-ದೆನ್ನ ಬಿನ್ನಪವ॥33-8-996॥

ಪ್ರಾಸಗಳ ಪೊಂದಿಸದೆ ಶಬ್ದ ಶ್ಲೇಷಗಳ ಶೋಧಿಸದೆ ದೀರ್ಘ
ಪ್ರಾಸಗಳ ಸಲ್ಲಿಸದೆ ಷಟ್ಪದಿ ಗತಿಗೆ ನಿಲ್ಲಿಸದೆ।
ದೂಷಕರು ದಿನ ದಿನದಿ ಮಾಡುವ ದೂಷಣವೆ ಭೂಷಣವು ಎಂದುಪ
ದೇಶ ಗಮ್ಯವು ಹರಿಕಥಾಮೃತ ಸಾರ ಸಾಧ್ಯರಿಗೆ॥33-9-997॥

ಅಶ್ರುತಾ-ಗಮ ಭಾವ-ವಿದರ ಪರಿಶ್ರಮವು ಬಲ್ಲವರಿ-ಗಾನಂ
ದಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕೃತಿಯು।
ಮಿಶ್ರರಿಗೆ ಮರೆಮಾಡಿ ದಿವಿಜರ ಜಸ್ರದಲಿ ಕಾಯ್ದಿಪ್ಪ-ರಿದರೊಳ
ಪಶ್ರುತಿ-ಗಳೈ ತಪ್ಪವೇ ನಿಜ ಭಕ್ತಿಯು-ಳ್ಳರಿಗೆ॥33-10-998॥

ನಿಚ್ಚ ನಿಜ ಜನ ಮೆಚ್ಚೆನೆಲೆ-ಗೊಂಡಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು
ಕೆಚ್ಚೆ ಕೇಳ್ವರು ಮೆಚ್ಚಿ ಮಲ ಮನ ಮುಚ್ಚಲೆಂ-ದೆನುತ।
ಉಚ್ಚ-ವಿಗಳಿಗೆ ಪೊಚ್ಚ ಪೊಸದೆನ-ಲುಚ್ಚರಿಸಿದೀ-ಸುಚ್ಚರಿತ್ರೆಯ
ನುಚ್ಚರಿಸೆ ಸಿರಿವತ್ಸ-ಲಾಂಛನ ಮೆಚ್ಚಲೇ-ನರಿದು॥33-11-999॥

ಸಾಧು ಸಭೆಯೊಳು ಮೆರೆಯೆ ತತ್ತ್ವ ಸು-ಬೋಧ ವೃಷ್ಟಿಯ-ಗರೆಯೆ ಕಾಮ
ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ।
ವಾದಿಗಳ ಪಲ್ಮುರಿಯೆ ಪರಮ ವಿನೋದಿಗಳ ಮೈಮರೆಯ-ಲೋಸುಗ
ಹಾದಿ ತೋರಿದ ಹಿರಿಯ ಬಹು ಚಾತುರ್ಯ ಹೊಸ ಪರಿಯ॥33-12-1000॥

ವ್ಯಾಸ ತೀರ್ಥರ ಒಲವು ವಿಠಲೋ-ಪಾಸಕ ಪ್ರಭುವರಿಯ ಪುರಂದರ
ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ।
ಕೇಶವನ ಗುಣ ಮಣಿಗಳನು ಪ್ರಾಣೇಶ-ಗರ್ಪಿಸಿ ವಾದಿರಾಜರ
ಕೋಶ-ಕೊಪ್ಪುವ ಹರಿಕಥಾಮೃತ ಸಾರ ಪೇಳಿದರು॥33-13-1001॥

ಹರಿಕಥಾಮೃತ ಸಾರ ನವರಸ ಭರಿತ ಬಹು ಗಂಭೀರ ರತ್ನಾ
ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ।
ಸರಸ ನರಕಂ-ಠೀರವಾಚಾ-ರ್ಯರ ಜನಿತ ಸುಕುಮಾರ ಸಾತ್ವೀ
ಕರಿಗೆ ಪರಮೋದಾರ ಮಾಡಿದ ಮರೆಯ-ದುಪಕಾರ॥33-14-1002॥

ಅವನಿಯೊಳು ಜ್ಯೋತಿಷ್ಮತಿಯ ತೈ-ಲವನು ಪಾಮರನುಂಡು ಜೀರ್ಣಿಸ
ಲವನೆ ಪಂಡಿತ-ನೋಕರಿಪ-ನವಿವೇಕಿ-ಯಪ್ಪಂತೆ।
ಶ್ರವಣ ಮಂಗಳ ಹರಿಕಥಾಮೃತ ಸವಿದು ನಿರ್ಗುಣ ಸಾರ ಮುಕ್ಕಿಸ
ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿ-ಯದಿದು॥33-15-1003॥

ಅಕ್ಕರ-ದೊಳೀ ಕಾವ್ಯದೊಳು ಒಂದಕ್ಕರವ ಬರೆದೋ-ದಿದವ ದೇ
ವರ್ಕಳಿಗೆ ದುಸ್ತ್ಯಜ-ನೆನಿಸಿ ಧರ್ಮಾರ್ಥ ಕಾಮಗಳ।
ಲೆಕ್ಕಿಸದೆ ಲೋಕೈಕ ನಾಥನ ಭಕ್ತಿ ಭಾಗ್ಯವ ಪಡೆವ ಜೀವ
ನ್ಮುಕ್ತ-ಗಲ್ಲದೆ ಹರಿಕಥಾಮೃತ ಸಾರ ಸೊಗಸುವುದೆ॥33-16-1004॥

ಒತ್ತಿ ಬಹ ವಿಘ್ನಗಳ ತಡೆ-ದಪ-ಮೃತ್ಯುವಿಗೆ ಮರೆ ಮಾಡಿ ಕಾಲನ
ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲ ಸಿದ್ಧಿಗಳ
ಒತ್ತಿಗೊಳ್ಳಿಸಿ ವನರು-ಹೇಕ್ಷಣ ನೃತ್ಯ ಮಾಡುವ-ನವನ ಮನೆಯೊಳು
ನಿತ್ಯ ಮಂಗಳ ಹರಿಕಥಾಮೃತ ಸಾರ ಪಠಿಸುವರ॥33-17-1005॥

ಆಯುರಾರೋ-ಗ್ಯೈಶ್ವರ್ಯ ಯಶ-ಧೈರ್ಯ-ಬಲ-ವಿಜ್ಞಾನ-ಸಮ-ಸಾ
ಹಾಯ-ಶೌರ್ಯೋದಾರ್ಯ-ಗುಣ ಗಾಂಭೀರ್ಯ ಮೊದಲಾದ
ಆಯತಗ-ಳುಂಟಾಗ-ಲೊಂದ-ಧ್ಯಾಯ ಪಠಿಸಿದ ಮಾತ್ರದಿಂ ಶ್ರವ
ಣೀಯ-ವಲ್ಲವೆ ಹರಿಕಥಾಮೃತ ಸಾರ ಸುಜನರಿಗೆ॥33-18-1006॥

ಕುರುಡ ಕಂಗಳ ಪಡೆವ ಬಧಿರನಿ-ಗೆರಡು ಕಿವಿ ಕೇಳ್ಬಹವು ಬೆಳೆಯದ
ಮುರುಡ ಮದನಾಕೃತಿಯ ತಾಳ್ವನು ಕೇಳ್ದ ಮಾತ್ರದಲಿ।
ಬರಡು ಹೈನಾಗುವದು ಪೇಳ್ದರೆ ಕೊರಡು ಪಲ್ಲೈಸುವುದು ಪ್ರತಿ ದಿನ
ಹುರುಡಿ-ಲಾದರು ಹರಿಕಥಾಮೃತ ಸಾರವನು ಪಠಿಸೆ॥33-19-1007॥

ನಿರ್ಜರ ತರಂಗಿಣಿ-ಯೊಳನುದಿನ ಮಜ್ಜನಾದಿ ಸಮಸ್ತ ಕರ್ಮ ವಿ
ವರ್ಜಿತಾಶಾ-ಪಾಶದಿಂದಲಿ ಮಾಡಿದ-ಧಿಕಫಲ।
ಹೆಜ್ಜೆ ಹೆಜ್ಜೆಗೆ ದೊರೆಯದಿಪ್ಪವೆ ಸಜ್ಜನರು ಶಿರದೂಗು-ವಂದದಿ
ಗರ್ಜಿಸುತಲೀ ಹರಿಕಥಾಮೃತ ಸಾರ ಪಠಿಸುವಗೆ॥33-20-1008॥

ಸತಿಯರಿಗೆ ಪತಿ ಭಕುತಿ ಪತ್ನೀವ್ರತ ಪುರುಷರಿಗೆ ಹರುಷ ನೆಲೆಗೊಂ
ಡತಿ-ಮನೋಹರವಾಗಿ ಗುರು ಹಿರಿಯರಿಗೆ ಜಗದೊಳಗೆ।
ಸತತ ಮಂಗಳವೀವ ಬಹು ಸು-ಕೃತಿಗಳೆನಿಸುತ ಸುಲಭದಿಂ ಸ
ದ್ಗತಿಯ ಪಡೆವರು ಹರಿಕಥಾಮೃತ ಸಾರವನು ಪಠಿಸೆ॥33-21-1009॥

ಎಂತು ವರ್ಣಿಸ-ಲೆನ್ನಳವೆ ಭಗವಂತ-ನಮಲ ಗುಣಾನು-ವಾದಗ
ಳೆಂತು ಪರಿಯಲಿ ಪೂರ್ಣಬೋಧರ ಮತವ ಪೊಂದ್ಯವರ।
ಚಿಂತನೆಗೆ ಬಪ್ಪಂತೆ ಬಹು ದೃಷ್ಟಾಂತ ಪೂರ್ವಕವಾಗಿ ಪೇಳ್ದ ಮ-
ಹಾಂತರಿಗೆ ನರರೆಂದು ಬಗೆವರೆ ನಿರಯ ಭಾಗಿಗಳು॥33-22-1010॥

ಮಣಿ ಖಚಿತ ಹರಿವಾಣದಲಿ ವಾರಣ ಸುಭೋಜ್ಯ ಪದಾರ್ಥ ಕೃಷ್ಣಾ
ರ್ಪಣ-ವೆನುತ ಪಸಿದವರಿ-ಗೋಸುಗ ನೀಡುವಂದದಲಿ।
ಪ್ರಣತರಿಗೆ ಪೊಂಗನಡ ವರವಾ-ಙ್ಮಣಿಗಳಿಂ ವಿರಚಿಸಿದ ಕೃತಿಯೊಳು
ಉಣಿಸಿ ನೋಡುವ ಹರಿಕಥಾಮೃತ ಸಾರವನುದಾರ॥33-23-1011॥

ದುಷ್ಟ-ರೆನ್ನದೆ ದುರ್ವಿಷಯದಿಂ-ಪುಷ್ಟರೆನ್ನದೆ ಪೂತ ಕರ್ಮ
ಭ್ರಷ್ಟ-ರೆನ್ನದೆ ಶ್ರೀದವಿಟ್ಠಲ ವೇಣುಗೋಪಾಲ।
ಕೃಷ್ಣ ಕೈಪಿಡಿಯುವನು ಸತ್ಯ ವಿಶಿಷ್ಟ ದಾಸತ್ವವನು ಪಾಲಿಸಿ
ನಿಷ್ಠೆ-ಯಿಂದಲಿ ಹರಿಕಥಾಮೃತ ಸಾರ ಪಠಿಸುವರ॥33-24-1012॥

Be the fortunate one have glimplse by clicking the link below:

HariKathAmtruthasAra-20022014

Harikathamruthasara in Sanskrit script will be published shortly.

Sri Lakshminarasimha Pradhurbhava Dandaka


Sri Lakshminarasimha pradhurbhava Dandaka, authoried by “Sri Sripadarja Guru Sarbhowma” is published in Kannada PDF format.

The real caliber of Sri Sripadarajaru can just be experienced, when we just dive into this oceanic jewel, which renders the most effective depiction of Sri Narasimha’s emanation from the Pillar.

nakanarasimha

The most piercing and breathtaking diction of Sri Rajaju comes out like bolt from blue. It matches, the theme blossoming out, most effectively.

Hiranyakashipu’s demonic behavior; Sri Prahlada’s unrelenting Bhakti, belief and surrender; Almighty’s oath ” न मे भक्तः प्रणश्यति” are depicted to just piece the heart of a Devotee.

It is just a treat to watch, it is just charm to chant, it is just a ocean to delve in..

Want to experience for yourself ?

Then click the below link and experience.

SriLakshiminarasimhaPradhurbhava Dandakam15102013

Hari bhakti Sara


Haribhakthisara of Sri Kanakadasa is published in kannada downloadable  PDF format

Master piece of Kanakadasa, bringing out the essence of Bhakthi and its significance in devotional advancement. This rendering  is in Bhamini Shatpadi.  It has 108 verses in total. In addition 3 Mangala Slokas are also there.

The Ultimate cream of devotion to Sri Hari, is expounded in lucid and no uncertain terms.

In first 17 verses, he praises Lord Sri Hari in unique ways [1-17].

Eg.

ಮಂಗಳಾತ್ಮಕ ದುರಿತತಿಮಿರ ಪ । ತಂಗ ಗರುಡತುರಂಗ ರಿಪುಮದ
ಭಂಗ ಕೀರ್ತಿತರಂಗ ಸುರಹರಸಂಗ ನೀಲಾಂಗ

ಅಂಗದಪ್ರಿಯನಂಗಪಿತ
। ಕಾಳಿಂಗಮರ್ದನ ಅಮಿತ ಕರುಣಾ
ಪಾಂಗ ಶ್ರೀನರಸಿಂಗ ರಕ್ಷಿಸು ನಮ್ಮನನವರತ
॥ 10

He states the purpose of this work  and pleads for his guidance from Verse 18 to 23.

Eg.

ಭಕ್ತಿಸಾರದ ಚರಿತೆಯನು ಹರಿ । ಭಕ್ತರಾಲಿಸುವಂತೆ ರಚಿಸುವೆ
ಯುಕ್ತಿಯಲಿ ಬರೆದೋದಿದವರಿಷ್ಟಾರ್ಥ ಸಿದ್ಧಿಪುದು

ಮುಕ್ತಿಗಿದು ನೆಲೆದೋರಿಪುದು ಹರಿ
। ಭಕ್ತರನು ಲಾಲಿಪುದು ನಿಜಮತಿ
ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ
॥ 18

ಗಿಳಿಯಮರಿಯನು ತಂದು ಪಂಜರ । ದೊಳಗೆ ಪೋಷಿಸಿ ಕಲಿಸಿ ಮೃದು
ನುಡಿಗಳನು ಲಾಲಿಸಿ ಕೇಳ್ವ ಪರಿಣತರಂತೆ ನೀನೆನಗೆ

ತಿಳುಹಿ ಮತಿಯನು ಎನ್ನ ಜಿಹ್ವೆಗೆ ಮೊಳಗುವಂದದಿ ನಿನ್ನ ನಾಮಾ

ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ
॥ 20

From 24th to 46th verse, he depicts the greatness of Sri Hari as founded in various Puranas.

ಪೊಗಲಳವೇ ನಿನ್ನ ನಾಮದ । ಸುಗುಣ ಸಚ್ಚಾರಿತ್ರ ಕಥನವ
ನಗಣಿತೋಪಮ ಅಮಿತ ವಿಕ್ರಮಗಮ್ಯ ನೀನೆಂದು

ನಿಗಮತತಿ ಕೈವಾರಿಸುತ ಪದ
। ಯುಗವ ಕಾಣದೆ ಬಳಲುತಿದೆ ವಾ
ಸುಕಿಶಯನ ಸರ್ವೇಶ ರಕ್ಷಿಸು ನಮ್ಮನನವರತ
॥ 21

ಹಸಿವರಿತು ತಾಯ್ತನ್ನ ಶಿಶುವಿಗೆ । ಒಸೆದು ಮೊಲೆ ಕೊಡುವಂತೆ ನೀ ಪೋ
ಷಿಸದೆ ಬೇರಿನ್ನಾರು ಪೋಷಕರಾಗಿ ಸಲಹುವರು

ಬಸಿರೊಳಗೆ ಬ್ರಹ್ಮಾಂಡಕೋಟಿಯ
। ಪಸರಿಸಿದ ಪರಮಾತ್ಮನೀನೆಂ |
ದುಸುರುತಿವೆ ವೇದಗಳು ರಕ್ಷಿಸು ನಮ್ಮನನವರತ
॥ 23

ಹಗೆಯರಿಗೆ ವರವೀವರಿಬ್ಬರು । ತೆಗೆಯಲರಿಯರು ಕೊಟ್ಟ ವರಗಳ
ತೆಗೆದು ಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ

ಸುಗುಣರಿನ್ನಾರುಂಟು ಕದನವ
। ಬಗೆದು ನಿನ್ನೊಳು ಜೈಸುವವರೀ
ಜಗದೊಳುಂಟೇ ದೇವ ರಕ್ಷಿಸು ನಮ್ಮನನವರತ
॥ 28

The essence of Man’s helplessness, birth, mortality, the Almighty’s magnanimity, command, power etc. are expounded from Verse 47 to 101.

ದೀನ ನಾನು ಸಮಸ್ತ ಲೋಕಕೆ । ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು

ಏನ ಬಲ್ಲೆನು ನಾನು ನೆರೆ ಸುಜ್ಞಾನಮೂರುತಿ ನೀನು ನಿನ್ನ ಸ

ಮಾನರುಂಟೇ ದೇವ ರಕ್ಷಿಸು ನಮ್ಮನನವರತ
॥ 49

ಮಾಂಸ ರಕ್ತದ ಮಡುವಿನಲಿ । ನವಮಾಸ ಜನನಿಯ ಜಠರದೊಳಗಿರು
ವಾ ಸಮಯದಲಿ ವೃತ್ತಿಯನು ಕಲ್ಪಿಸಿದ ಪ್ರಭುವಾರು

ನೀ ಸಲಹಿದವನಲ್ಲವೇ ಕರುಣಾ ಸಮುದ್ರನು ನೀನಿರಲು ಕಮ

ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ
॥ 56

ಎತ್ತಿದೆನು ನಾನಾ ಶರೀರವ । ಹೊತ್ತಲಿಸಿದೆನು ಸಲೆ  ಬೇ
ಸೆತ್ತು ನಿನ್ನಯ ಪದವ ಕಾಣದೆ ತೊಳಲಿ ಬಳಲಿದೆನು

ಸತ್ತು ಹುಟ್ಟುವ ಹುಟ್ಟಿ ಹಿಂಗುವ
। ಸುತ್ತ ತೊಡಕನು ಮಾಣಿಸದೆ ಪುರು
ಷೋತ್ತಮನೆ ಮನವೊಲಿದು ರಕ್ಷಿಸು ನಮ್ಮನನವರತ
॥ 60

ಗಣನೆಯಿಲ್ಲದ ಜನನಿಯರ ಮೊಲೆ । ಯುಣಿಸಲಾಪಯಬಿಂದುಗಳನದ
ನೆಣಿಸಲಳವೇ ಸಪ್ತಸಾಗರಕಧಿಕವೆನಿಸುವುದು

ಬಣಗು ಕಮಲಜನದಕೆ ತಾನೇ
। ಮಣೆಯಗಾರನು ಈತ ಮಾಡಿದ
ಕುಣಿಕೆಗಳ ನೀ ಬಿಡಿಸಿ ರಕ್ಷಿಸು ನಮ್ಮನನವರತ
॥ 62

ಎಂಟುಗೇಣಿನ ದೇಹ ರೋಮಗಳೆಂಟುಕೋಟಿಯು ಕೀಳ್ಗಳರವ
ತ್ತೆಂಟು ಮಾಂಸಗಳಿಂದ ಮಾಡಿದ ಮನೆಯ ಮನವೊಲಿದು

ನೆಂಟ ನೀನಿದ್ದಗಲಿದೊಡೆ ಒಣ ಹೆಂಟೆಯಲಿ ಮುಚ್ಚುವರು ದೇಹದ

ಲುಂಟೆ ಫಲ ಪೂರುಷಾರ್ಥ ರಕ್ಷಿಸು ನಮ್ಮನನವರತ
॥ 66

ಒಡೆಯ ನೀನೆಂದರಿತು ನಾ ನಿ । ಮ್ಮಡಿಯ ಭಜಿಸದೆ ದುರುಳನಾದೆನು
ಮಡದಿ ಮಕ್ಕಳ ಮೋಹದಲಿ ಮನ ಸಿಲುಕಿತಡಿಗಡಿಗೆ

ಮಡದಿಯಾರೀ ಮಕ್ಕಳಾರೀ
। ಒಡಲಿಗೊಡೆಯನು ನೀನು ನೀ ಕೈ
ಪಿಡಿದು ಮುದದಲಿ ಬಿಡದೆ ರಕ್ಷಿಸು ನಮ್ಮನನವರತ
॥ 70

ವರುಷ ನೂರಾಯುಷ್ಯವದರೊಳ । ಗಿರುಳು ಕಳೆದೈವತ್ತು ಐವ
ತ್ತರಲಿ ವಾರ್ಧಿಕ ಬಾಲ್ಯ ಕೌಮಾರದಲಿ ಮುವತ್ತು

ಇರದೆ ಸಂದದು ಬಳಿಕ ಇಪ್ಪ
। ತ್ವರುಷವದರೊಳಗಾದುದಂತಃ
ಕರಣ ನಿನ್ನಳಗಿತ್ತು ರಕ್ಷಿಸು ನಮ್ಮನನವರತ
॥ 80

ಸತ್ತವರಿಗಳಲೇಕೆ ತನ್ನನು ಹೊತ್ತವರು ಹೆತ್ತವರು  ತಾವ್
ಸತ್ತುಹೋಗುವರಲ್ಲದುಳಿವರೆ  ಮರುಗಲೇಕಿನ್ನು

ಮೃತ್ಯು ಬೆನ್ನಿನೊಳಿಹುದ ತಾವಿ
। ನ್ನತ್ತು ಮಾಡುವೇದನು ಪೂರ್ವದ
ತೆತ್ತಿಗನು ನೀನೀಗ ರಕ್ಷಿಸು ನಮ್ಮನನವರತ
॥ 92

ತೊಲಗುವರು ಕಡೆಕಡೆಗೆ ತಾ ಹೊಲೆ । ಹೊಲೆಯೆನುತ ಕಳವಳಿಸಿ ಮೂತ್ರದ
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು

ಜಲದೊಳಗೆ ಮುಳುಗಿದರೆ ತೊಲಗದು
। ಹೊಲಗೆಲಸವೀದೇಹದೊಳು ನೀ
ನೆಲೆಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ
॥ 99

ಎಂಜಲೆಂಜಲು ಎಂಬರಾನುಡಿ । ಎಂಜಲಲ್ಲವೇ ವಾರಿ ಜಲಚರ
ದೆಂಜಲಲ್ಲವೇ ಹಾಲು ಕರುವಿನ ಎಂಜಲೆನ್ನಿಸದೇ

ಎಂಜಲಿಲ್ಲದೆಯುಂ ಪರ
। ರೆಂಜಲಲ್ಲದೆ ಬೇರೆ ಭಾವಿಸ
ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ
॥ 101

From Verse 102 to 108 he brings out the resultant benefits of imbibing the values advocated:

eg.

ನೂರುಕನ್ಯಾದಾನವನು ಭಾ । ಗೀರಥಿಸ್ನಾನವನು ಮಿಗೆ ಕೈ
ಯಾರ ಗೋವ್ಗಳ ಪ್ರೇಮದಿಂದಲಿ ಭೂಸುರರಿಗೊಲಿದು

ಊರುಗಳನೂರಗ್ರಹಾರವ
। ದಾರೆಯೆರದಿತ್ತಂತೆ ಫಲ ಕೈ
ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ವರಿಗೆ
॥ 106

ಮೇರು ಮಂದರನಿಭಸುವರ್ಣವ ವಾರಿ । ಮಧ್ಯದೊಳಿರುವ ಅವನಿಯ
ನಾರಿಯರ  ಗಾಯತ್ರಿ ಪಶುಗಳನಿತ್ತ ಫಲವಹುದು

ಧಾರುಣಿಯಳೀ ಭಕ್ತಿಸಾರವ
। ನಾರು ಓದುವವರಿಗನುದಿನ
ಚಾರುವರಗಳನಿತ್ತು ರಕ್ಷಿಪನಾದಿಕೇಶವನು
॥ 107

Let us be our fortunate  to have a glimpse of this noble work ! Click the below link and enjoy !
Haribhaktisara-23022014

Tatwa Suvali


Tatwa Suvali is published in Kannada PDF Format :

A rare and unique Master piece of Jagannatha Dasa.

Author  Jagannatha Dasa, one of the greatest Personalities in Dasa Sahithya, was a treasure of indepth wisdom of Sanskrit literatures.

His subtle understanding of Vyasa Sahithya, and specialised insight in  Sriman Nyaya Sudha of Jayatheertha and overall grip in Sarvamoola Grantha of Acharya Madhwa and an unparalleled diction in Sanskrit and Kannada, made him one of the greatest Alrounders, who could just swim with equal ease, both in Vyasa and Dasa Sahitya.

His lucid and forceful style of depicting even intricate subject matter is spell bounding, and needs only to be experienced.

ಕನ್ನಡದಲ್ಲಿ ಜಗನ್ನಾಥ ದಾಸರ ಗುಣಗಾನ

ತತ್ವಸುವ್ವಾಲಿ  ಶ್ರೀ ಜಗನ್ನಾಥದಾಸರ ಕೃತಿ. ದಾಸಸಾಹಿತ್ಯದಲ್ಲಿ ಅಪೂರ್ವ, ಅಪರೂಪದ ಕೃತಿ| ಶ್ರೀಜಗನ್ನಾಥದಾಸರದೂ ಅಷ್ಟೇ ಅಪೂರ್ವ ವ್ಯಕ್ತಿತ್ವ| ಸಂಸ್ಕೃತ-ಕನ್ನಡದಲ್ಲಿ ಸಮಸಮ  ಸವ್ಯಸಾಚಿ ಪ್ರಭುತ್ವ, ಪಾಂಡಿತ್ಯ| ಶ್ರೀ ಮಧ್ವಸಿದ್ಧಾಂತದಲ್ಲಿ ಆಳವಾದ ವಿದ್ವತ್ತು. ಸುಧಾಗ್ರಂಥಗಳ ಅಪಾರ ಅಧ್ಯಯನ| ಸೂಕ್ಷ್ಮ ಪ್ರಮೇಯ ಜ್ಞಾನ. ಅನುಸಂಧಾನದ ಅನುಭವ. ಉಪಾಸನೆಯ ಸಿದ್ಧಿಯ ಸಿದ್ಧಪುರುಷರು – ಶ್ರೀಜಗನ್ನಾಥದಾಸರು|

ತತ್ತ್ವ ಸುವ್ವಾಲಿಗಳು ತ್ರಿಪದಿ ಶೈಲಿ. ಸರಳ ರಚನೆ, ಸುಲಭ ಭಾಷೆ, ತತ್ತ್ವಗಳ ನಿರೂಪಣೆ, ದೇವದೇವತೆಗಳ ಹಿರಿಮೆ, ಮಧ್ವಮತದ ಮಹಿಮೆ, ಶ್ರೀಹರಿಯ ಸರ್ವೋತ್ತಮತ್ವ, ತತ್ತ್ವಗಳ ವಿವೇಚನೆ ಈ ವಾಲಿಗಳಲ್ಲಿ ತುಂಬಿವೆ| ಶ್ರೀಜಗನ್ನಾಥದಾಸರು ಷಟ್ಪದಿ, ತ್ರಿಪದಿಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ| ಅದಕ್ಕೆ ಕನ್ನಡ ಸಾಹಿತ್ಯದಲ್ಲಿ ಸರಿಸಾಟಿಯೇ ಇಲ್ಲ| ದಾಸಾರ್ಯರು ಚತುಃಶಾಸ್ತ್ರ ಪಂಡಿತರು| ಸಂಸ್ಕೃತದಲ್ಲಿಯೇ ವಾದ ವಾಕ್ಯಾರ್ಥ ಮಾಡುವ ದಿಗ್ಗಜ ವಿಧ್ವಾಂಸರು| ಅಂತಹ ಜಗನ್ನಾಥದಾಸರ ಕನ್ನಡ ಭಾಷೆ, ಅದರ ವಿವಿಧ ಪ್ರಕಾರಗಳು, ಅಭಿವ್ಯಕ್ತಿಯ ಸಹಜತೆ, ಸರಳ ಶಬ್ದ ಸಂಯೋಜನೆ, ಆಶ್ಚರ್ಯವೆನಿಸುವವು| ತತ್ವಸುವ್ವಾಲಿಯ ಒಂದೊಂದು ನುಡಿಯ ಒಡಲಲ್ಲಿ ಅಪಾರ ಅರ್ಥಗಳಿವೆ| ಇಲ್ಲಿಯ ಒಂದೊಂದು ಶಬ್ದಗಳೂ ಅಪಾರ ಆಶಯಗಳ ಪ್ರತಿಮೆಗಳಾಗಿವೆ| ಒಂದೊಂದೂ ಮುತ್ತಿನ ಮಣಿ ತುಂಬಿದ ಮುಸುಕಿನಜೋಳದಂತಿವೆ|

ಸುವ್ವಿ ಎಂದರೆ ಹೆಣ್ಣುಮಕ್ಕಳು ಹಾಡಿಕೊಳ್ಳುವ ಮಂಗಳ ಪದಗಳು| ಮನೆಗೆಲಸ ಮಾಡಿಕೊಳ್ಳುವಾಗಲೂ ಹಾಡಿಕೊಳ್ಳುವ ಮಂಗಳ ಪದಗಳು| ನೆಮ್ಮದಿ ನೀಡಬಲ್ಲಸಾರ್ಥಕ ಕೃತಿಗಳು| ಇಲ್ಲಿ ಗಣಪತಿಸ್ತುತಿಯಿಂದ ಆರಂಭಿಸಿ ಶ್ರೀನಾರಾಯಣನವರೆಗೆ ಎಲ್ಲ್ದ ದೇವತೆಗಳ ಸ್ತುತಿಗಳಿವೆ| ಮಧ್ವಮತದ ಪ್ರಮೇಯ ನಿರೂಪಣೆ ಇದೆ|  ಕೊನೆಯಲ್ಲಿ ಮಾಯಾವಾದ ಖಂಡನವು ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಪಾದಿಸಲ್ಪಟ್ಟಿದೆ|

ಇಂತಹ ತತ್ತ್ವಸುವ್ವಾಲಿಯನ್ನು ರಚಿಸಿ, ಸಾಧನಮಾರ್ಗದಲ್ಲಿರುವ ಸಚ್ಚೇತನರಿಗೆ ಮಹೋಪಕಾರ ಮಾಡಿದ್ದಾರೆ| ಶ್ರೀಹರಿಯ ಪಾರಮ್ಯ ಸರ್ವದೇಶ, ಸರ್ವಕಾಲಗಳಲ್ಲಿ  ಸಮನೆಂದೆನಿಸಿ, ಅವನಿಗೆ ಸೇವೆ ಸಲ್ಲಿಸುತ್ತಿರುವ ಶ್ರೀಮಹಾಲಕ್ಷ್ಮಿಯ ಸ್ಥಾನ-ಮಾನಗಳು, ಬ್ರಹ್ಮ, ವಾಯು ರುದ್ರದೇವರು, ಅಗ್ನಿ ಮತ್ತು ನವಗ್ರಹಗಳ ಮಹಾತ್ಮೆ ಮುಂತಾದ ತಾತ್ತ್ವಿಕ ವಿಚಾರಗಳನ್ನು ಶ್ರೀ ದಾಸಾರ್ಯಸು ತಮ್ಮ ಶ್ರೀಮಂತ ವಾಣಿಯಿಂದ ಸ್ತೋತ್ರರೂಪದಲ್ಲಿ ಸರಳ ಸುವ್ವಾಲಿಗಳ ರೂಪದಲ್ಲಿ ಕೊಟ್ಟಿದ್ದಾರೆ| ಇದು ವಿವಿಧ ಹಂತದಲ್ಲಿರುವ ಸಾಧಕ ವರ್ಗಕ್ಕೆ ತತ್ತ್ವ ಪ್ರಮೇಯಗಳ ಚಿಂತನ-ಮಂಥನಕ್ಕೆ ಅನುಕೂಲಕರವಾದ ಕೃತಿಯಾಗಿದೆ.

ಈ ಕೃತಿಯ ಕೆಲವು ನುಡಿ ಮುತ್ತುಗಳು

ಎನ್ನಪ್ಪ ಎನ್ನಮ್ಮ ಎನ್ನಯ್ಯ ಎನ್ನಣ್ಣ ಎನ್ನರಸ ಎನ್ನ ಕುಲದೈವ |
ಕುಲದೈವ ಇಹಪರದಿ ಎನ್ನ ಬಿಟ್ಟಲಗದೇ ಇರು ಕಂಡ್ಯ ॥ 335 ॥

ಶ್ವಾನಸೂಕರನೀಚಯೊನಿಯೊಳು ಬರಲಂಜೆ ಶ್ರೀನಾಥ ನಿನ್ನ ಸ್ಮೃತಿಸ್ವರ್ಗ|
ಸ್ಮೃತಿಸ್ವರ್ಗಸುಖ ನಿನಗಾನು ಬೇಡುವೆನು ಕರುಣಿಸೋ ॥ 201 ॥

ಮುನ್ನಾವಜನ್ಮದ ಪುಣ್ಯ ತಾ ಫಲಿಸಿತೋ ನಿನ್ನಂಥ ಸ್ವಾಮಿ ಎನಗಾದಿ|
ಎನಗಾದಿ ಅದರಿಂದ ಧನ್ಯರೋ ನಮ್ಮ ಹಿರಿಯರು ॥ 235 ॥

ನಿನ್ನ ವಿಸ್ಮೃತಿಕೊಡುವ ಪುಣ್ಯಕರ್ಮಗಳೊಲ್ಲೆ ನಿನ್ನನೇ ನೆನೆವ ಮಹಾಪಾಪ|
ಮಹಪಾಪ ಕರ್ಮಗಳು ಜನ್ಮಜನ್ಮದಲಿ ಇರಲಯ್ಯ ॥ 242 ॥

ಕರ್ಮಜ್ಞ ಕರ್ಮೇಶ ಕರ್ಮಪ್ರವರ್ತಕನೆ ಕರ್ಮಫಲದಾತ ಕರ್ಮಸ್ಥ|
ಕರ್ಮಸ್ಥಎನ್ನದುಷ್ಕರ್ಮ ಕಳೆದು ನೀ ಸಲಹಯ್ಯ ॥ 342 ॥

ಏಸು ಜನ್ಮದ ಪುಣ್ಯ ತಾ ಸಮನಿಸಿತೋ ಎನಗೆ ವಾಸುಕಿಶಯನ ಜನರೆಲ್ಲ|
ಜನರೆಲ್ಲ ವೈಕುಂಠದಾಸನೆಂದೆನ್ನ ತುತಿಸೋರು॥ 176॥

ಇಂತಹ ಕೃತಿಯಲ್ಲಿ ಮಿಂದು ಪುನೀತರಾಗುವ ಕಾಲವು ಬಂದಾಗಿದೆ. ಇದರ ತಾತ್ವಿಕ ಸೌಂದರ್ಯವನ್ನು ಸವಿಯುವ ಪುಣ್ಯವು ನಮ್ಮದಾಗಲಿದೆ.ಹಾಗಿದ್ದರೆ ಬನ್ನಿ ಕೃತಿಯನ್ನು ತೆರೆದು ಆನಂದಿಸಿರು. ಇದೊ ಇಲ್ಲಿದೆ ಈ ಕೃತಿ

Click the link below to open this great Tatwa Suvvali

TatwaSuvali

Phalavidu Baldudake


Phalavidu Baldudake published in PDF downloadable format:

Animals live for years! Plants live for hundreds of years! Human beings also live. What’s the difference?

Animals eat, sleep & mate. Human Beings also do ! What’s then the difference?

JagannathaDasaru-Manvi
JagannathaDasaru-Manvi

The life of Animals ends with eating, sleeping and mating. They don’t have any other purpose. It breaths its last without any other meaningful accomplishments. Whereas, the life of man is for a different purpose ! He is blessed with Intelligence and wisdom. He is brought into existence, just not to live like animals. He is blessed with intelligence, wisdom which, no other animals posses. So what else should he accomplish?

Man has to accomplish the essentials of life, using this additional faculty and to move forward in Spiritual Arena. He improves on his spiritual personality, by following the guidelines laid down by Shastra, Smriti, Itihasa, Purana, etc. The guidelines laid in them help him in regulating his ambitions, deeds and purposes. Only then, the life lead by him is meaningful.

Hence, meaningful and purposeful life is the essence of mankind. Sri Jagannatha Dasa the Author with astounding wisdom both in Vyasa Sahitya and Dasa Sahitya, expounded this work, distilling all the valid essential requirements of man’s deeds, purposes and accomplishments. The lucid way, he summaries, setting out the essentials of Mental Frame (Anusandhana) which needs to be scrupulously followed, to attain the vision and meaning of Human existence.

Only Fortunates will have a chance, to have a glimpse of this lovely work stuffed with enormous meanings.

Let’s do this by clicking the below link:

PhalaviduBaldudake-01052013

Jagannatha Dasa


JagannathaDasaru

Jagannatha Dasaru [1726-1809].

He is the most distinguished Dasa after Vijaya Dasa. He is the native of Byagavata in Manvi Taluk of Raichur.  His contribution to Dasa Sahitya is exemplary.

All his works goes under Ankitha ” Jagannatha Vittala”. Like Savyachi, his mastery in Sanskrit works aided  his contribution to Dasa Sahitya.  The depth he commanded in  technical Wisdom and theological intricacies is astounding.

His Magnum Opus – “Harikathamruthasara” explodes with mines of intricate Madhwa philosophy”. The lucid style and  emphatic representation is a treat to watch.

Each of his thousands of works has seamless blended into the heart of Dasa Sahithya loving cult.

With great reverance, we  have taken up the mamoth task of publishing his works. Only with his grace and blessings, it should be possible.

May the lord bless us with all the resources to accomplish this noble task.